
ಭಜರಂಗಿ ಅವತಾರದಲ್ಲಿ ಡಿ ಬಾಸ್: ಅಭಿಮಾನಿಗಳು ಫುಲ್ ಖುಷ್
ಚೌಕದಲ್ಲಿ ರಾಬರ್ಟ್ ಲುಕ್ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಕೆಲ ನಿಮಿಷಗಳ ಪಾತ್ರವಾಗಿದ್ದರೂ, ರಾಬರ್ಟ್ನ ಖಡಕ್ ಡೈಲಾಗ್, ಫೈಟ್ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗಿತ್ತು.
ಜಬರ್ದಸ್ತ್ ಟೈಟಲ್ ಮೂಲಕವೇ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ ಕ್ರಿಸ್ಮಸ್ಗೆ ಭರ್ಜರಿ ಪೋಸ್ಟರ್ ಬಿಡುಗಡೆ ಮಾಡಿದ್ದ ರಾಬರ್ಟ್ ಚಿತ್ರತಂಡ ಸಂಕ್ರಾಂತಿ ಪ್ರಯುಕ್ತ ಎರಡನೇ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಚಾಲೆಂಜಿಂಗ್ ಸ್ಟಾರ್ ರಾಮ ಭಕ್ತ ಹನುಮನ ವೇಷದಲ್ಲಿ ದರ್ಶನ ನೀಡಿದ್ದಾರೆ.
ಎಳ್ಳು ಬೆಲ್ಲ ಸವಿಯುತ್ತಾ ಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ಹೊಸ ಅವತಾರ ಖುಷಿ ನೀಡಿದ್ದು, ರಾಬರ್ಟ್ನ ಹೊಸ ಮೋಷನ್ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
2018ರ ಕ್ರಿಸ್ಮಸ್ ವೇಳೆ ಬಿಡುಗಡೆಯಾಗಿದ್ದ ಭಕ್ತಿ ಪ್ರಧಾನದ ಪೋಸ್ಟರ್ನ್ನು ಹೋಲುವ ಈ ಮೋಷನ್ ಪೋಸ್ಟರ್ನಲ್ಲಿ ನೃತ್ಯದ ಝಲಕ್ಗಳನ್ನು ಬಳಸಲಾಗಿದೆ. ಬಣ್ಣದೋಕುಳಿಯಿಂದ ಕೂಡಿರುವ ರಾಬರ್ಟ್ ಹೊಸ ಲುಕ್ನ್ನು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದಾರೆ.
ಈ ಹಿಂದೆ ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು’ ಎನ್ನುವ ಪಂಚಿಂಗ್ ಲೈನ್ ಪೋಸ್ಟರ್ ನೋಡಿದ ಡಿ ಫ್ಯಾನ್ಸ್ ಇದೀಗ ಮತ್ತೊಮ್ಮೆ ರಾಬರ್ಟ್ ಲುಕ್ಗೆ ಫಿದಾ ಆಗಿದ್ದಾರೆ.
ಸದ್ಯ ರಾಬರ್ಟ್ ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದ್ದು, ಎರಡು ಹಾಡುಗಳು ಮಾತ್ರ ಉಳಿದಿವೆ. ‘ಚೌಕ’ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಉಮಾಪತಿಯವರು ಬಂಡವಾಳ ಹೂಡಿದ್ದಾರೆ.
‘ಚೌಕ’ದಲ್ಲಿ ರಾಬರ್ಟ್ ಲುಕ್ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಕೆಲ ನಿಮಿಷಗಳ ಪಾತ್ರವಾಗಿದ್ದರೂ, ‘ರಾಬರ್ಟ್’ನ ಖಡಕ್ ಡೈಲಾಗ್, ಫೈಟ್ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗಿತ್ತು.
ಇದೀಗ ಅದೇ ಪಾತ್ರದಲ್ಲಿ ಡಿ ಬಾಸ್ ರಿ ಎಂಟ್ರಿ ಕೊಡುತ್ತಿರುವುದರಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಹೀಗಾಗಿಯೇ ದರ್ಶನ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ತರುಣ್ ಸುಧೀರ್ ಸಹ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಡಿ ಬಾಸ್ ಅನ್ನು ಅಭಿಮಾನಿಗಳ ಮುಂದಿಡಲು ಪಣ ತೊಟ್ಟಿದ್ದಾರೆ.